ಗೋವಾದಲ್ಲಿ ಬೆನ್ನು-ಕತ್ತಿಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್‍ಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿನ್ನೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸತತ 3 ಗಂಟೆಗೂ ಹೆಚ್ಚು ಕಾಲ ಮಣಿಪಾಲ್ ಆಸ್ಪತ್ರೆಯ ಸ್ಪೈನಲ್ ಕಾರ್ಡ್ ವಿಭಾಗದ ಮುಖ್ಯಸ್ಥರಾದ ಡಾ. ವಿಧ್ಯಾಧರ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ಗೋವಾದ ಬೀಜ್‍ನಲ್ಲಿ ಸೋಮರ್ ಪ್ಲಿಪ್ ಮಾಡುವಾಗ ನಟ ದಿಗಂತ್ ಬೆನ್ನು, ಕತ್ತಿಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಅಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ರೂ, ಕತ್ತಿನ ಹುರಿಗೆ ಪೆಟ್ಟು ಬಿದ್ದಿದ್ದ ಕಾರಣ ತುರ್ತಾಗಿ ಸಣ್ಣ ಆಪರೇಷನ್ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ, ನಿನ್ನೆ ಸಂಜೆ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯ್ತು. ನಟ ದಿಗಂತ್‍ಗೆ ಯಾವುದೇ ತೀವ್ರ ಸಮಸ್ಯೆಗಳು ಆಗಿಲ್ಲ, ಆರೋಗ್ಯವಾಗಿದ್ದಾರೆ, ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ, ಚೆನ್ನಾಗಿದ್ದಾರೆ ಎಂದು ದಿಗಂತ್ ತಂದೆ ಕೃಷ್ಣ ಮೂರ್ತಿ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಯೋಗರಾಜ್ ಭಟ್ ದಿಗಂತ್ ಆರೋಗ್ಯವಾಗಿದ್ದಾರೆ.. ಇದೊಂದು ಸಣ್ಣ ಸ್ಫೋಟ್ಸ್ ಇಂಜುರಿ.. ಬೇಗ ಹುಷಾರಾಗ್ತಾನೆ ಅಂದ್ರು.
#publictv #newscafe #diganthmanchale